Posts

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಬೆಳ್ತಂಗಡಿ ಕಚೇರಿ‌ ಉದ್ಘಾಟನೆ

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಬೆಳ್ತಂಗಡಿ ಕಚೇರಿ‌ ಉದ್ಘಾಟನೆ


ಭಾರತ್‌ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಇದರ ಉಜಿರೆಯಿಂದ ಸ್ಥಳಾಂತರಗೊಂಡ ಬೆಳ್ತಂಗಡಿ ನೂತನ ಕಚೇರಿಯು ಬೆಳ್ತಂಗಡಿ ಗುರುಸಾನಿಧ್ಯ ವಾಣಿಜ್ಯ ಮಳಿಗೆಯಲ್ಲಿ  ಸೋಮವಾರ ಉದ್ಘಾಟನೆಗೊಂಡಿತು.



ಕನ್ಯಾಡಿ ಶ್ರೀರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಇಲ್ಲಿನ ಯತಿಶ್ರೇಷ್ಠರೂ ಮಹಾ ಮಂಡಲಾಧೀಶರೂ ಆಗಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಶಾಖೆಯನ್ನು ಉದ್ಘಾಟಿಸಿದರು.

ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಶ್ರೀ‌ಗುರುದೇವ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಯೋಗೀಶ ನಡಕರ, ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ಶುಭಕೋರಿದರು.

ಈ‌ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ, ನ್ಯಾಯವಾದಿ ಸೋಮನಾಥ ಬಿ ಅಮೀನ್, ನಿರ್ದೇಶಕರುಗಳಾದ ಭಾಸ್ಕರ್ ಎಂ. ಸಾಲ್ಯಾನ್ , ಗಂಗಾಧರ್ ಜೆ. ಪೂಜಾರಿ, ಚಂದ್ರಶೇಖರ್ ಎಸ್. ಪೂಜಾರಿ, ನಾರಾಯಣ್ ಎಲ್. ಸುವರ್ಣ, ಸುರೇಶ್ ಬಿ. ಸುವರ್ಣ ಮತ್ತು ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ನ  ಅಧ್ಯಕ್ಷ ಪ್ರಜ್ವಲ್ ಜೆ. ಪೂಜಾರಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ್ ಎಸ್. ಕರ್ಕೇರ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್ ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜಾ, ಸುಜೀತಾ ವಿ ಬಂಗೇರ, ತಾರಾವತಿ ಜಗನ್ನಾಥ್ - ಡಾಕ್ಟರ್ ಜಗನ್ನಾಥ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ರವೀಂದ್ರ ಪೂಜಾರಿ ಆರ್ಲ, ಹಿರಿಯ ಪತ್ರಕರ್ತ ಅಶ್ರಫ್ ಅಲಿಕುಂಞಿ ಮುಂಡಾಜೆ, ಕಾಶಿಪಟ್ಣ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ, ಜಯಂತ್ ಕೋಟ್ಯಾನ್ ಮರೋಡಿ, ಝಕರಿಯಾ ಉಜಿರೆ, ಪ್ರೆಸ್‌ಕ್ಲಬ್ ಬೆಳ್ತಂಗಡಿ ಉಪಾಧ್ಯಕ್ಷ, ಸಂತೋಷ್ ಪಿ. ಕೋಟ್ಯಾನ್,  ಗುರುದೇವ ಸೊಸೈಟಿ ಉಪಾಧ್ಯಕ್ಷ  ಜಗದೀಶ್ಚಂದ್ರ ಡಿ ಕೆ, ತುಕಾರಾಂ ಬಂಗೇರ, ಎಂ.ಬಿ ಜಯಶಂಕರ್ ಉಜಿರೆ, ಯು.ಕೆ ಮುಹಮ್ಮದ್ ಹನೀಫ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾಂಕಿನ ಚೀಫ್ ಮೆನೇಜರ್ ಗಳಾದ ರವೀಂದ್ರ ಕುಂದರ್, ಅರುಣ್ ಜಿ ಕೋಟ್ಯಾನ್, ಉಪಪ್ರಬಂಧಕ ಉಮೇಶ್ ಕೋಟ್ಯಾನ್, ಬಿಸಿ ರೋಡ್ ಶಾಖಾ ಪ್ರಬಂಧಕ ಗಣೇಶ್ ಅಮೀನ್, ಪುತ್ತೂರು ಶಾಖಾ ಪ್ರಬಂಧಕ ಸುಶಾಂತ್ ಡಿ ಪೂಜಾರಿ, ಬ್ಯಾಂಕಿನ ಸಿಬ್ಬಂದಿಗಳಾದ ಸುಧೀರ್ ಕೆ ಸಾಲ್ಯಾನ್, ಮಂಜುನಾಥ ಜನಾರ್ದನ್, ಸಂದೀಪ್ ವಿ ಅಮೀನ್, ಮಾರ್ಕೆಟಿಂಗ್ ವಿಭಾಗದ  ಸುಪ್ರೀತಾ, ಹೇಮಚಂದ್ರ, ಆಶಿಶ್, ಸುದರ್ಶನ್, ಅರ್ಪಿತಾ, ಸುಧಾ, ಪಾರಿತೋಷ್, ಸಂತೋಷ್, ಯೋಗೀಶ್, ಅವಿನಾಶ್, ಸಂಗೀತಾ, ಸುವಿಧಾ ಭಾಗಿಯಾಗಿದ್ದರು. 

ಚರಿಷ್ಮಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ದೀಪಕ್ ಡಿ ಪೂಜಾರಿ‌ ಸ್ವಾಗತಿಸಿದರು. ಶಾಖಾ ಉಪಪ್ರಬಂಧಕಿ ಶ್ವೇತಾ ರವಿ ಕುಮಾರ್ ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official