Posts

ತುಂಡಾದ ವಿದ್ಯುತ್ ವಯರ್ ಸ್ಪರ್ಶಿಸಿ ಪದ್ಮುಂಜದ ಕೂಲಿ ಕಾರ್ಮಿಕ ದಾರುಣ ಸಾವು

ಬೆಳ್ತಂಗಡಿ: ಕಡಿದು‌ಬಿದ್ದ ವಿದ್ಯುತ್ ವಯರ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತರಾದ ಘಟನೆ ಪದ್ಮುಂಜ ಗ್ರಾಮದ ಪೊಯ್ಯ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತರಮ್ನಿ ಕೂಲಿ ಕಾರ್ಮಿಕ ನಾಣ್ಯಪ್ಪ ಪೂಜಾರಿ (55.ವ) ಎಂಬವರೆಂದು ಗುರುತಿಸಲಾಗಿದೆ.



ನಾಣ್ಯಪ್ಪ ಅವರು ಬೆಳಗ್ಗೆ 6.30 ಕ್ಕೆ  ಉಪ್ಪಿನಂಗಡಿ ಕೋಳಿ ಅಂಗಡಿಗೆ ಕೂಲಿ ಕೆಲಸಕ್ಕೆಂದು ಹೋಗುವ ಸಂದರ್ಭ ದಾರಿ ಮಧ್ಯೆ ಈ ದುರ್ಘಟನೆನೆಯ ನಡೆದಿದೆ. 

ವಿದ್ಯುತ್ ವಯರ್ ತುಂಡಾಗಿ ಬಿದ್ದಿರುವುದನ್ನು ಗಮನಿಸದೆ ಅವರ  ಕಾಲಿಗೆ ತಗಲಿ ಘಟನೆ ನಡೆದಿದೆ.

ದಾರಿ ಹೋಕರು ಇದನ್ನು ಗಮನಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆನ್ನಲಾಗಿದೆ.

ಮೃತರು ಪತ್ನಿ ಕೇಶವತಿ, ಪುತ್ರಿ ದೀಕ್ಷಿತಾ, ಪುತ್ರರಾದ ದೀಕ್ಷಿತ್, ರಕ್ಷಿತ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official