Posts

ಪ್ರಗತಿಪರ ಕೃಷಿಕ ಸಾಮಾಜಿಕ ಮುಂದಾಳು ಐ.ಎಲ್ ಪಿಂಟೋ ನಿಧನ

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಕೊಪ್ಪದಬೈಲು ನಿವಾಸಿ, ಪ್ರಗತಿಪರ ಕೃಷಿಕ, ಹಿರಿಯ ಸಾಮಾಜಿಕ‌ ಮುಂದಾಳು ಐ.ಎಲ್ ಪಿಂಟೋ (ಇಸಿದೋರ್ ಲಿಯೋ ಪಿಂಟೋ) ಇಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಚರ್ಚ್ ಪಾಲನಾ ಮಂಡಳಿಯಲ್ಲಿ ಪದಾಧಿಕಾರಿಯಾಗಿ, ಆರ್ಥಿಕ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಚರ್ಚ್ ನಲ್ಲಿ ಸಲ್ಲಿಸಿದ್ದ ಸೇವೆಗೆ ಅವರಿಗೆ ಪುರಸ್ಕಾರ ಕೂಡ ಲಭಿಸಿತ್ತು. ಅನೇಕ ಮಂದಿ ಬಡವರಿಗೆ ಸಹಾಯಹಸ್ತ ಚಾಚುತ್ತಿದ್ದ ಅವರು ಅರ್ಹ ಕುಟುಂಬದ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿದ್ದರು. ಸಂಘ ಸಂಸ್ಥೆಗಳಿಗೂ ಆರ್ಥಿಕ ಸಹಕಾರ ನೀಡುತ್ತಿದ್ದರು. ಪ್ರಗತಿಪರ ಕೃಷಿಕರಾಗಿದ್ದು ಶ್ರಮ ಜೀವಿಯಾಗಿದ್ದರು. ಕೊಪ್ಪದಬೈಲು ಎಂಬಲ್ಲಿ ಕೃಷಿಭೂಮಿ ಹೊಂದಿದ್ದ‌ ಅವರು ಅಲ್ಪಾವಧಿ ಮತ್ತು ದೀರ್ಘಾವಧಿಯ ಬಹುವಿಧ ಕೃಷಿಯಲ್ಲಿ ಪ್ರಸಿದ್ಧಿ ಪಡೆದಿದ್ದು ಕೃಷಿ ಇಲಾಖೆಯಿಂದಲೂ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು.

ಕಳೆದ‌ ಅಲ್ಪದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. 

ಅವರ ಅಂತ್ಯಸಂಸ್ಕಾರ ರವಿವಾರ ಬೆಳಿಗ್ಗೆ 10.00 ಗಂಟೆಗೆ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ. ಅವರ ಪತ್ನಿ ಕೆಲವರ್ಷಗಳ ಹಿಂದಷ್ಟೇ ಮೃತಪಟ್ಟಿದ್ದರು.‌ ಇದೀಗ ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official