Posts

ಬೆಳ್ತಂಗಡಿ ಕ್ಯಾಥಡ್ರಲ್ ದೇವಾಲಯದಿಂದ ಸಿಯೋನ್ ಆಶ್ರಮಕ್ಕೆ ಆರ್ಥಿಕ ಸಹಾಯ

0 min read

ಬೆಳ್ತಂಗಡಿ; ಇಲ್ಲಿನ ಸಂತ ಲಾರೆನ್ಸ್ ಕ್ಯಾಥೆಡ್ರಲ್ ದೇವಾಲಯದ

ಸೆಂಟ್ ಲಾರೆನ್ಸ್ ಕೋವಿಡ್ ನಿಧಿಯಿಂದ ಸುಮಾರು ನಲವತ್ತು ಸಾವಿರ ರೂಪಾಯಿಯ ಚೆಕ್ಕನ್ನು ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ನೀಡಲಾಯಿತು.

ಆಶ್ರಮದ ಸೇವೆಯ  ಬಗ್ಗೆ ಮೆಚ್ಚುಗೆ ಸೂಚಿಸಿ ಯೇಸು ಕ್ರಿಸ್ತರ ಬೋಧನೆ ನಿರಂತವಾಗಿ ಕೃತಿಯ ರೂಪದಲ್ಲಿ ಜನಮಧ್ಯದಲ್ಲಿ ಬೋದಿಸಲ್ಪಡಲಿ ಎಂದು ಈ ಸಂದರ್ಭದಲ್ಲಿ  ಕಥೆಡ್ರಲ್ ಚರ್ಚ್ ಧರ್ಮಗುರು ವಂ. ಫಾ. ಥೋಮಸ್ ಕಣ್ಣಾಂಕಲ್ ತಿಳಿಸಿದರು.

ಸಿಯೋನ್ ಆಶ್ರಮಕ್ಕೆ ಆಹಾರಕ್ಕೆ ಮತ್ತು  ಅಲ್ಲಿನ ಆರೋಗ್ಯ ಸಿಬ್ಬಂದಿಗೆ ಗೌರವ ಧನವಾಗಿ ಇದನ್ನು ಕೊಡುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳಾದ ಚರ್ಚಿನ ಟ್ರಸ್ತೀಗಳಾದ ಅಜಯ್, ಥೋಮಸ್, ರೆಜಿ, ವಿನು ರೂಪೇಶ್, ಅಭಿಲಾಶ್, ಸೈಬು, ಬೆನ್ನಿ ಹಾಗೂ ಗಂಡಿಬಾಗಿಲಿನ ಚರ್ಚ್ ನ ಧರ್ಮಗುರು ವಂ. ಫಾ. ಷಾಜಿ ಮಾತ್ಯು ಉಪಸ್ಥಿತರಿದ್ದರು. ಸಿಯೋನ್ ಆಶ್ರಮ ಟ್ರಸ್ಟಿ  ಯು. ಸಿ ಪೌಲೋಸ್  ಅವರು ದೇಣಿಗೆ ಮೊತ್ತದ ಚೆಕ್ಕನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment