Posts

ಪತಿ‌ ನಿಧನರಾಗಿ ಎಂಟೇ ದಿನಗಳಲ್ಲಿ ಪತ್ನಿಯೂ ಕೋವಿಡ್‌ಗೆ ಬಲಿ

1 min read

ಬೆಳ್ತಂಗಡಿ; ಮಚ್ಚಿನ‌ ಗ್ರಾ.ಪಂ ವ್ಯಾಪ್ತಿಯ ಬಂಗೇರಕಟ್ಟೆ ‌ಪ್ರದೇಶದ ಕೃಷಿಕ ವ್ಯಕ್ತಿ ಕೋವಿಡ್ ಗೊಳಗಾಗಿ ನಿಧನರಾದ ಎಂಟೇ ದಿನಗಳ ಅಂತರದಲ್ಲಿ ಪತ್ನಿಯೂ ಕೊನೆಯುಸಿರೆಳೆದ ವಿದ್ಯಮಾನ ನಡೆದಿದೆ.

ಮೃತರು ಆಲಿಕುಂಞಿ ಮತ್ತು  ಅವರ ಪತ್ನಿ ಖತೀಜಮ್ಮ ಎಂಬವರಾಗಿದ್ದಾರೆ.

ಆರಂಭದಲ್ಲಿ ಕಿಲ್ಲೂರಿನಲ್ಲಿ ಕೃಷಿ ಮಾಡಿ‌‌ನೆಲೆಸಿದ್ದ ಅವರು ಪ್ರಸ್ತುತ ಮಚ್ಚಿನ ಗ್ರಾ.ಪಂ ವ್ಯಾಪ್ತಿಯ ಬಂಗೇರಕಟ್ಟೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು.

ಆರಂಭದಲ್ಲಿ‌ ಆಲಿಕುಂಞಿ ಅವರಿಗೆ ಕೋವಿಡ್ ರೋಗಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ  ಮಂಗಳೂರಿನ‌‌ ಕೆ.ಎಸ್ ಹೆಗ್ಡೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.‌ ಅದರ ಜೊತೆಗೆ ಪತ್ನಿಗೂ ಕೋವಿಡ್ ಬಾಧಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪತಿ ಮೇ.22 ರಂದು ಮೃತರಾದರೆ‌, ಮೇ.30 ರಂದು ಅವರ ಪತ್ನಿಯೂ ಇದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಆಲಿಕುಂಞಿ ಅವರು ಮೂಲತಃ ಮಂಗಳೂರು‌ ತಾಲೂಕಿನ ಮಂಜ್ಞನಾಡಿ‌ ಕುರಿಯದವರಾದರೆ ಖತೀಜಮ್ಮ ಅವರು ಮುಂಡಾಜೆ ಗ್ರಾಮದ ದಿ. ಜಿ.ಕೆ ಇಬ್ರಾಹಿಂ ಹಾಜಿ ಅವರ ಪುತ್ರಿ. ಮೃತ ದಂಪತಿ ಜಿ.ಕೆ ಆಸಿಫ್ ಮತ್ತು‌ ಜಿ.ಕೆ ಅಝರ್ ಎಂಬಿಬ್ಬರು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರು‌ ಇಬ್ಬರ ಅಂತ್ಯಸಂಸ್ಕಾರ ವಿಧಿಗಳೂ ಮಂಜ್ಞನಾಡಿಯ ಕುರಿಯ‌ತರವಾಡು ಜಾಗದ ಮಸೀದಿ ಪಕ್ಕದಲ್ಲಿ ನಡೆಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment