Posts

ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ವೆಂಕಟೇಶ್ ನಾಯ್ಕ್‌‌ ಅವರಿಗೆ ಎಎಸ್‌ಐ ಆಗಿ ಪದೋನ್ನತಿ

1 min read

ಬೆಳ್ತಂಗಡಿ: ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ತನಿಖಾ ಸಹಾಯಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿಯಲ್ಲಿ ಕಳೆದ ೬ ವರ್ಷಗಳಿಂದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ವೆಂಕಟೇಶ್ ನಾಯ್ಕ್ ಅವರಿಗೆ ಎಎಸ್‌ಐ ಆಗಿ ಪದೋನ್ನತಿಯಾಗಿದ್ದು ಬಂಟ್ವಾಳ ಸಂಚಾರಿ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದೆ.

ಮೂಲತಃ ಮಂಗಳೂರು ತಾಲೂಕು ಕೊಂಪದವು ರುಕ್ಮಯ್ಯ ನಾಯ್ಕ್ ಮತ್ತು ಗೋಪಿ ಆರ್ ನಾಯ್ಕ್ ದಂಪತಿ ಪುತ್ರರಾಗಿರುವ ವೆಂಕಟೇಶ್ ನಾಯ್ಕ್, ೧೯೯೬ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ.  ಉಡುಪಿ ಸಂಚಾರ ಠಾಣೆ, ಉಪ್ಪಿನಂಗಡಿ ಠಾಣೆ, ವಿಟ್ಲ ಠಾಣೆಯಲ್ಲಿ ಕರ್ತವ್ಯ ಸಲ್ಲಿಸಿ ೨೦೧೪ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿಹೊಂದಿದ್ದಾರೆ. ಪ್ರಸ್ತುತ ಅವರು ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕರ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು.

ಉಜಿರೆ ಎಸ್.ಆರ್.ಬಾರ್ ಎದುರು ನಡೆದ ಕೊಲೆ ಪ್ರಕರಣ, ಕೊಯ್ಯೂರು, ವೇಣೂರು ಮತ್ತು ಲಾಯಿಲದಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣ, ಮರೋಡಿ ಲೈಂಗಿಕ ಹಲ್ಲೆ ಪ್ರಕರಣ, ವಿಟ್ಲದಲ್ಲಿ ನಡೆದಿದ್ದ ಕೊಲೆ ಪ್ರಕರಣ, ಉಜಿರೆ ಅಪಘಾತದಲ್ಲಿ ಶಿಕ್ಷಕಿ ಸಾವು ಪ್ರಕರಣ ಸೇರಿದಂತೆ ಇಂತಹಾ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ಕರ್ತವ್ಯ ಸಲ್ಲಿಸಿ ಅವರು ಸಮರ್ಥರಾಗಿದ್ದಾರೆ.

ಅವರ ಈ ರೀತಿಯ ಕರ್ತವ್ಯದಕ್ಷತೆಗೆ ಅವರಿಗೆ ಈ‌ಬಾರಿ ಮುಖ್ಯಮಂತ್ರಿ ಪದಕ‌ ಕೂಡ ಲಭಿಸಿತ್ತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment