ಬೆಳ್ತಂಗಡಿ:ಧರ್ಮಗುರುಗಳ ಧಾರ್ಮಿಕ ಪದವಿಯಾದ ಬಾಖವಿ ಪದವೀಧರರ ಸಂಘಟನೆ 'ಸಮಸ್ತ ಬಾಖವಿ ಉಲಮಾ ಒಕ್ಕೂಟ ಕರ್ನಾಟಕ' ಇದರ ಪ್ರಥಮ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆಯು ಪುತ್ತೂರ ನಡೆಯಿತು.
ಈ ಸಂದರ್ಭ ನೂತನ ಸಮಿತಿ ರಚಿಸಲಾಗಿ ಗೌರವಾಧ್ಯಕ್ಷರಾಗಿ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ರಫೀಕ್ ಬಾಖವಿ ಮಠ, ಪೈವಳಿಕೆ, ಮುಹಮ್ಮದ್ ರಫೀಕ್ ಬಾಖವಿ ಕುಶಾಲನಗರ ಮತ್ತು ಅಬ್ದುಲ್ ಖಾದರ್ ಬಾಖವಿ ಕಂಬಳಬೆಟ್ಟು, ಕೋಶಾಧಿಕಾರಿಯಾಗಿ ಮುಹಮ್ಮದ್ ರಫೀಕ್ ಬಾಖವಿ ಮೂಡಬಿದ್ರೆ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಸ್ಸಮದ್ ಬಾಖವಿ ಮೂಡಿಗೆರೆ, ಮುಹಮ್ಮದ್ ಫಾರೂಕ್ ಬಾಖವಿ ಬಂಟ್ವಾಳ ಮತ್ತು ನೌಶಾದ್ ಬಾಖವಿ ಕೊಡಗು,ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಬಾಖವಿ ಚಾಪಲ್ಲ ಸವಣೂರು,
ಮೀಡಿಯಾ ವಿಂಗ್- ಉಸ್ಮಾನ್ ರಾಝೀ ಬಾಖವಿ ಅಕ್ಕರಂಙಡಿ ಮತ್ತು ಆರಿಫ್ ಬಾಖವಿ ಕೊಪ್ಪ ,ಶೃಂಗೇರಿ ಇವರುಗಳನ್ನು ನೇಮಿಸಲಾಯಿತು.
ರಫೀಕ್ ಬಾಖವಿ ಮಠ ನೇತೃತ್ವ ದರ್ಗಾ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮದಲ್ಲಿ ದುಆಃ ಮತ್ತು ಅಧ್ಯಕ್ಷತೆಯನ್ನು ಉಸ್ತಾದ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ನಿರ್ವಹಿಸಿದರು. ಹಮೀದ್ ಬಾಖವಿ ಉಸ್ತಾದ್ ಬೈರಿಕಟ್ಟೆ ಉದ್ಘಾಟಿಸಿದರು.
ಪೈವಳಿಕೆ ಮುದರ್ರಿಸ್ ರಫೀಕ್ ಬಾಖವಿ ಮಠ ವಿಷಯ ಮಂಡನೆ ಮಾಡಿದರು. ಬಾಖಿಯಾತು ಸ್ವಾಲಿಹಾತಿನಲ್ಲಿ ಅಂತ್ಯವಿಶ್ರಾಂತಿಗೊಳ್ಳುತ್ತಿರುವ ಅಶೈಖ್ ಅಬ್ದುಲ್ ವಹ್ಹಾಬ್ ಖಾದಿರ್ರಿಲ್ ವೆಲ್ಲೂರು(ಬಾನಿ ಹಝ್ರತ್) ಇವರ ಹೆಸರಿನಲ್ಲಿ ಖತಮುಲ್ ಕುರ್-ಆನ್ ಸಮರ್ಪಿಸಿ ಪ್ರಾರ್ಥನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ , ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೆ.ಐ.ಸಿ ಕುಂಬ್ರ ಮುದರ್ರಿಸ್ ಮುಹಮ್ಮದ್ ಆರಿಫ್ ಬಾಖವಿ ಸ್ವಾಗತಿಸಿದರು. ಅಬ್ದುಸ್ಸಮದ್ ಬಾಖವಿ ಧನ್ಯವಾದವಿತ್ತರು.