Posts

ಸೇನೆಯಿಂದ ನಿವೃತ್ತಿ ಹೊಂದಿದ ಕಡಿರುದ್ಯಾವರದ ಯತೀಂದ್ರ ಹೆಚ್.ಜೆ

1 min read

ಬೆಳ್ತಂಗಡಿ; ಕಡಿರುದ್ಯಾವರ ಮಠ ಹೊಸಮನೆ ನಿವಾಸಿ ಯತೀಂದ್ರ ಪೂಜಾರಿ ಅವರು 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತ ಹೊಂದಿದ್ದಾರೆ.

ಕಡಿರುದ್ಯಾವರ ಗ್ರಾಮದ ರಮಣಿ ಮತ್ತು ಜಗದೀಶ್ ಪೂಜಾರಿ ದಂಪತಿ ಪುತ್ರರಾಗಿರುವ ಯತೀಂದ್ರ ಅವರು ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬಳಿಕ ವೇಣೂರು ಐಟಿಐ ಯಲ್ಲಿ ಆಟೋಮೊಬೈಲ್ ಶಿಕ್ಷಣ ಪಡೆದಿದ್ದರು. ಮುಂಡಾಜೆಯ ಜಯರಾಂ ಕೆ ಅವರು ನಡೆಸುವ ಕಲಾಕುಂಚ ಕೇಂದ್ರದ ವಿದ್ಯಾರ್ಥಿಯೂ ಆಗಿದ್ದರು. 

ಈ ವೇಳೆ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2004 ರಲ್ಲಿ  ದೇಶ ಸೇವೆಗೆ ಅರ್ಹತೆ ಪಡೆದಿದ್ದರು.

ಸೇನೆಗೆ ಸೇರಿದ ಅವರು ಜಮ್ಮು ಕಾಶ್ಮೀರ, ಉತ್ತರಾಖಂಡ್, ಅಸ್ಸಾಂ,ರಾಜಸ್ಥಾನ, ದೆಹಲಿ, ಪಂಜಾಬ್‌ ಮತ್ತು ಬೆಂಗಳೂರು ಇಲ್ಲೆಲ್ಲಾ ಕರ್ತವ್ಯ ಸಲ್ಲಿಸಿ ಇದೀಗ ನಿವೃತ್ತ ರಾಗಿ ಸ್ವ ಗ್ರಾಮಕ್ಕೆ ಮರಳುತ್ತಿದ್ದಾರೆ.

ಇವರ ಸಹೋದರಿ ಜಯಚಿತ್ರಾ ಅವರನ್ನು ಉಜಿರೆಗೆ ಮತ್ತು ಸಹೋದರಿ ರಾಜಶ್ರೀ ಅವರನ್ನು ನೆಲ್ಯಾಡಿಗೆ ವಿವಾಹ ಮಾಡಿಕೊಡಲಾಗಿದ್ದು, ಸಹೋದರ ಯತೀಶ್ ಹೆಚ್.ಜೆ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ನಿವೃತ್ತರಾಗಿರುವ ಯತೀಂದ್ರ ಅವರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಅರ್ಥ್ ಮೂವರ್ಸ್ ಸಂಸ್ಥೆಯ ಮಾಲಿಕರೂ ಆಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment