ಬೆಳ್ತಂಗಡಿ; ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಡಿ.24 ರಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಬೆಳ್ತಂಗಡಿ ನಿಯೋಗ ಬಿಷಪ್ ಹೌಸ್‌ನಲ್ಲಿ ಭೇಟಿ ಮಾಡಿ ಶುಭ ಕೋರಿದರು.
ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಅವರು ಹೂಗುಚ್ಛನೀಡಿ ಗೌರವಿಸಿದ್ದೂ ಮಾತ್ರವಲ್ಲದೆ ರೋಟರಿಯ ಈ ವರ್ಷದ ಕಾರ್ಯಕ್ರಮದ ಭಾಗವಾದ ಜಲಸಂರಕ್ಷಣೆಯ ಅಂಗವಾಗಿ ಯೋಜಿಸಿರುವ 'ಜಲರಕ್ಷಕ್' ಯಂತ್ರವನ್ನು ವಿಶೇಷ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ ಕೆ.ವಿ, ಪ್ರಮುಖರಾದ ಯಶವಂತ ಪಟವರ್ಧನ್, ಡಾ.ಟಿ.ಪಿ ಆಂಟೊನಿ, ರೊನಾಲ್ಡ್ ಲೋಬೋ, ಮಿಥುನ್ ಮಾಡ್ತಾ ಇವರುಗಳು ಉಪಸ್ಥಿತರಿದ್ದರು.