Posts

ಬೆಳ್ತಂಗಡಿಯಲ್ಲಿ ಲಯನ್ ಪ್ರಾಂತ್ಯ ಸಮ್ಮೇಳನದ ಸಮಿತಿ ರಚನಾ ಸಭೆ; ಪ್ರಾಂತ್ಯ ಸಮ್ಮೇಳನ‌ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ ಆಯ್ಕೆ


ಬೆಳ್ತಂಗಡಿ; ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಇದರ ಪ್ರಾಂತ್ಯಾಧ್ಯಕ್ಷರಾಗಿ ಧರಣೇಂದ್ರ ಕೆ‌ ಜೈನ್ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧ್ಯಕ್ಷತೆಯಲ್ಲಿ ಮುಂದಕ್ಕೆ ನಡೆಯಲಿರುವ ಪ್ರಾಂತ್ಯ ಸಮ್ಮೇಳನದ  ಸಮಿತಿ ರಚನೆ ಸಭೆಯು ಜೇಸಿ ಭವನದಲ್ಲಿ ಮಂಗಳವಾರ ನಡೆಯಿತು. 

ಸಭೆಯ ಅಧ್ಯಕ್ಷತೆಯನ್ನು ಲಯನ್ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ‌ ಜೈನ್ ವಯಸಿದ್ದು, ಸಮ್ಮೇಳನ‌ ರೂಪುರೇಷೆ, ಸಮಿತಿಗಳ ಹುದ್ದೆಗಳ ಬಗ್ಗೆ ಪ್ರಸ್ತಾವನೆಯೊಂದಿಗೆ ವಿಷಯ ಮಂಡಿಸಿದರು.

ಆತಿಥೇಯ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಹೇಂಮತ ರಾವ್ ಯರ್ಡೂರು ಘನ‌ಉಪಸ್ಥಿತರಿದ್ದರು.
ಸಭೆಯಲ್ಲಿ ವಲಯಾಧ್ಯಕ್ಷ ವಸಂತ ಶೆಟ್ಟಿ ಸ್ವಾಗತಿಸಿದರು. 
ಪ್ರಾಂತ್ಯಾಧ್ಯಕ್ಷರ ಮೆಂಟರ್ ಗಳಾದ ಜಗದೀಶಚಂದ್ರ ಡಿ.ಕೆ ಮತ್ತು ನಿತೇಶ್ ಹೆಚ್, ವೇದಿಕೆಯಲ್ಲಿ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳಾದ ಹರ್ಮನ್ ಮಾರ್ಟಿನ್ ಡಿಸಿಲ್ವಾ, ಆನಂದ ಸಿಂಧೂರ್ ಗುರುಪುರ ಕೈಕಂಬ, ದಯಾನಂದ ರೈ ಕಟೀಲು ಎಕ್ಕಾರು, ಮೆಲ್ವಿನ್ ಡಿಕೋಸ್ತಾ ಮೂಡಬಿದ್ರೆ, ವಿನೋದ್ ಮೂಡಬಿದ್ರೆ, ಮೆಲ್ವಿನ್, ಇವರು ಉಪಸ್ಥಿತರಿದ್ದರು.

ಲಕ್ಷ್ಮಣ ಪೂಜಾರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಘುರಾಮ ಶೆಟ್ಟಿ ಉಜಿರೆ ನೀತಿ ಸಂಹಿತೆ ವಾಚಿಸಿದರು. ಮೇದಿನಿ ಡಿ ಗೌಡ ಪ್ರಾರ್ಥನೆ ಹಾಡಿದರು. 

ಈ‌ ವೇಳೆ ಪ್ರಾಂತ್ಯ ಸಮ್ಮೇಳನದ ಸಮಿತಿ‌ ರಚಿಸಲಾಗಿದ್ದು ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಕಾರ್ಯಾಧ್ಯಕ್ಷರಾಗಿ ನಿತ್ಯಾನಂದ ನಾವರ, ಪ್ರಧಾನ ಕಾರ್ಯದರ್ಶಿಯಾಗಿ ಕೆ ಕೃಷ್ಣ ಆಚಾರ್, ಕೋಶಾಧಿಕಾರಿಯಾಗಿ ರಾಜು ಶೆಟ್ಟಿ ಬೆಂಗೆತ್ಯಾರು ಇವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿ, ಸಂಚಾಲಕರು ಮತ್ತು ಸಹಸಂಚಾಲಕರುಗಳನ್ನು ನೇಮಿಸಲಾಯಿತು. ಪ್ರಾಂತ್ಯದ ಎಲ್ಲಾ ಕ್ಲಬ್ಬುಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

1 comment

  1. Best wishes for the Region Meet.
© Live Media News. All rights reserved. Distributed by Pixabin Official