Posts

ಜಿಂಕೆ ಚರ್ಮ ಪ್ರಕರಣದಲ್ಲಿ ಆರೋಪಿಗೆ ಜಾಮೀನು; ಬಂಧಿತ ಹನುಮಂತ ರಿಲೀಸ್


ಬೆಳ್ತಂಗಡಿ: ಜಿಂಕೆ ಚರ್ಮ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ಆರೋಪದಲ್ಲಿ ಪುತ್ತೂರು ಅರಣ್ಯ ಸಂಚಾರಿದಳದ ಎಸ್.ಐ ಜಾನಕಿ ನೇತೃತ್ವದ ತಂಡ ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಂಧಿಸಿದ್ದ ಆರೋಪಿ, 

ಬೆಳಗಾವಿಯ ಹನುಮಂತ (31ವ) ಅವರಿಗೆ ಬೆಳ್ತಂಗಡಿ ನ್ಯಾಯಾಲಯ ಶರತ್ತುಬದ್ಧ ಜಾಮೀನು ನೀಡಿದ್ದು, ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಿದೆ.  

ಬೆಳಗಾವಿಯಿಂದ ಖಾಸಗಿ ಬಸ್ ಮೂಲಕ ಬಂದು ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಹನುಮಂತ ನನ್ನು ಬಂಧಿಸಿದ್ದರು.

ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಸೆಕ್ಷನ್ ನಂತೆ ಕೇಸು ದಾಖಲಿಸಲಾಗಿತ್ತು.

ಇವರಿಗೆ ಮಾನ್ಯ ಬೆಳ್ತಂಗಡಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು,  ಆರೋಪಿಯ ಪರವಾಗಿ  ಬೆಳ್ತಂಗಡಿಯ ಯುವ ನ್ಯಾಯವಾದಿ ನವಾಝ್ ಷರೀಫ್ ಕಕ್ಕಿಂಜೆ ವಾದ ಮಂಡಿಸಿದ್ದರು. ತಂಡದಲ್ಲಿ ನ್ಯಾಯವಾದಿಗಳಾದ ಮುಮ್ತಾಝ್ ಬೇಗಂ, ಇರ್ಷಾದ್ ಮತ್ತು ಅನಿಶ್ ಜತೆಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

3 comments

  1. Congratulations ad.Nawaz Shareef and team 💓💓🔥💯
  2. Yahya
    This comment has been removed by the author.
  3. Congrats adv. Aneez
© Live Media News. All rights reserved. Distributed by Pixabin Official