ಬೆಳ್ತಂಗಡಿ; ಮಚ್ಚಿನ ಗ್ರಾಮದ ಬಳ್ಳಮಂಜ ಪೇಟೆಯ ತೆರೇಸಾ ವಾಣಿಜ್ಯ ಮಳಿಗೆಯಲ್ಲಿ ಮುಹಮ್ಮದ್ ನಜೀಬ್ ಕಳೆಂಜಿಬೈಲು ಅವರ ಬಿ.ಬಿ ಮೆಡಿಕಲ್ಸ್ ನೂತನ ಔಷಧ ವ್ಯಾಪಾರ ಮಳಿಗೆ ಶುಭಾರಂಭಗೊಂಡಿದೆ.
ನೂತನ ಮಳಿಗೆಯನ್ನು ಖ್ಯಾತ ಧಾರ್ಮಿಕ ವಿದ್ವಾಂಸ, ಪೆರ್ಣೆ ಉಸ್ತಾದ್ ಎಂದೇ ಖ್ಯಾತನಾಮರಾಗಿರುವ ಕೆ.ಬಿ ಅಬ್ಬಾಸ್ ಸಅದಿ ದುಆ ಮೂಲಕ ಉದ್ಘಾಟಿಸಿದರು. ಕಳೆಂಜಿಬೈಲು ಖತೀಬ್ ಬಿ.ವೈ ಅಬ್ದುಲ್ ಹಮೀದ್ ಸಅದಿ, ಬಂಗೇರಕಟ್ಟೆ ಖತೀಬ್ ಜಾಬಿರ್ ಫೈಝಿ ಇವರು ಉಪಸ್ಥಿತರಿದ್ದು ಶುಭಕೋರಿದರು.
ಸ್ಥಳೀಯ ಗಣ್ಯ ಅತಿಥಿಗಳಾದ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಹಿರಿಯ ವೈದ್ಯರುಗಳಾದ ಡಾ. ಕೆ. ಎಮ್ ಶೆಟ್ಟಿ ಮತ್ತು ಡಾ. ಸುಬ್ರಹ್ಮಣ್ಯ ಬಳ್ಳಾಲ್, ಕಳೆಂಜಿಬೈಲು ಜಮಾಅತ್ ಅಧ್ಯಕ್ಷ ಕೆ.ಹೆಚ್ ಅಬೂಬಕ್ಕರ್, ಎಸ್.ಕೆ.ಎಸ್.ಎಸ್.ಎಫ್ ಬಂಗೇರಕಟ್ಟೆ ಶಾಖೆ ಅಧ್ಯಕ್ಷ ರಫೀಕ್, ಮಚ್ಚಿನ ಗ್ರಾ.ಪಂ ಸದಸ್ಯ ಚಂದ್ರಶೇಖರ ಬಿ.ಎಸ್, ಹಾಗೂ ಮಾಲಿಕರ ಹೆತ್ತವರು, ಕುಟುಂಬಸ್ತರು ಆಗಮಿಸಿ ಶುಭಾಶೀರ್ವಾದಗೈದರು.
ಮೆಡಿಕಲ್ ಮಾಲಿಕ ಮುಹಮ್ಮದ್ ನಜೀಬ್ ಕಳೆಂಜಿಬೈಲು;
ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಸುಲೈಮಾನ್ ಮತ್ತು ಬೀಫಾತಿಮಾ ದಂಪತಿ ಪುತ್ರರಾದ ಮುಹಮ್ಮದ್ ನಜೀಬ್ ಅವರು ಪ್ರಾಥಮಿಕ ಶಿಕ್ಷಣವನ್ನು ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿಯಲ್ಲಿ ಪೂರೈಸಿ,ಪದವಿ ಪೂರ್ವ ಶಿಕ್ಷಣವನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದಾರೆ. ಬಳಿಕ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಫಾರ್ಮಸಿ ವಳಚ್ಚಿಲ್ ಇಲ್ಲಿ ಡಿ ಫಾರ್ಮಾ ಅಭ್ಯಸಿಸಿ ಉತ್ತೀರ್ಣರಾಗಿದ್ದಾರೆ.
ವೃತ್ತಿಕ್ಷೇತ್ರದ ಅನುಭವಕ್ಕಾಗಿ ಮೂಡಿಗೆರೆ, ಗೇರುಕಟ್ಟೆ ಮತ್ತು ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಬಳ್ಳಮಂಜದಲ್ಲಿ ಸ್ವಂತ ಔಷಧ ಮಳಿಗೆ ತೆರೆದಿದ್ದಾರೆ.
ಜನತೆಗೆ ಉತ್ತಮ ಸೇವೆ ನೀಡಲು ಬದ್ಧ ಎನ್ನುವ ಮುಹಮ್ಮದ್ ನಜೀಬ್ ಅವರು ಸಮಾಜದ ಬೆಂಬಲ ಯಾಚಿಸಿದ್ದಾರೆ.